ಆಗಾಗ್ಗೆ ಕೇಳುವ ಪ್ರಶ್ನೆಗಳು

ಆಗಾಗ್ಗೆ ಕೇಳುವ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿದ್ದೇವೆ:

ಪಶು ಭಾಗ್ಯ ಯೋಜನೆ ಕುರಿತು

1. ಪಶು ಭಾಗ್ಯ ಯೋಜನೆ ಸಂಬಂಧಪಟ್ಟಂತೆ ಮಾಹಿತಿ ಎಲ್ಲಿ ಲಭ್ಯವಿದೆ?
ಪಶು ಭಾಗ್ಯ ಯೋಜನೆ ಕುರಿತಾದ ಮಾಹಿತಿಯು ಈ ವೆಬ್ಸೈಟ್ ನಲ್ಲಿ ಲಭ್ಯವಿದೆ ಹಾಗೂ ನಿಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯಲ್ಲಿಯೂ ಸಹ ಮಾಹಿತಿ ಪಡೆದುಕೊಳ್ಳಬಹುದು.
2. ಪಶು ಭಾಗ್ಯ ಯೋಜನೆ ಸಂಬಂಧಪಟ್ಟಂತೆ ಮಾರ್ಗಸೂಚಿಗಳು ಮತ್ತು ಸರ್ಕಾರಿ ಆದೇಶಗಳು ಎಲ್ಲಿ ಲಭ್ಯವಿದೆ?
ಪಶು ಭಾಗ್ಯ ಯೋಜನೆ ಸಂಬಂಧಪಟ್ಟಂತೆ ಮಾರ್ಗಸೂಚಿಗಳು ಮತ್ತು ಸರ್ಕಾರಿ ಆದೇಶಗಳು ಈ ವೆಬ್-ಸೈಟ್ ನಲ್ಲಿ ಲಭ್ಯವಿದೆ ಹಾಗೂ ನಿಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯಲ್ಲಿಯೂ ಸಹ ಮಾಹಿತಿ ಪಡೆದುಕೊಳ್ಳಬಹುದು.
3. ಪಶು ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ನಿಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆ ಅಥವಾ ತಾಲ್ಲೂಕು ಪಶು ಆಸ್ಪತ್ರೆ ಅಥವಾ ಜಿಲ್ಲಾ ಉಪ ನಿರ್ದೇಶಕರ ಕಛೆರಿಗೆ ಭೇಟಿ ನೀಡಿ ಈ ಕುರಿತಂತೆ ಮಾಹಿತಿ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸುವ ಕುರಿತು

1. ಪಶು ಭಾಗ್ಯ ಯೋಜನೆಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಪಶು ಭಾಗ್ಯ ಯೋಜನೆಗೆ ಅರ್ಜಿಯನ್ನು ನಿಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯಲ್ಲಿ ಸಲ್ಲಿಸಬಹುದು.
2. ಪಶು ಭಾಗ್ಯ ಯೋಜನೆಗೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದೇ?
ಪ್ರಸ್ತುತ ಆನ್‍-ಲೈನ್‍ ಮೂಲಕ ಅರ್ಜಿ ಸಲ್ಲಿಸುವ ಸೌಲಭ್ಯ ಇರುವುದಿಲ್ಲ. ನಿಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಬಹುದು.
3. ಹತ್ತಿರದ ಪಶುವೈದ್ಯಕೀಯ ಸಂಸ್ಥೆಯ ಮೂಲಕ ಸಲ್ಲಿಸಿದ ಪಶು ಭಾಗ್ಯ ಯೋಜನೆ ಅರ್ಜಿಯನ್ನು ಆನ್ಲೈನ್ ಮೂಲಕ ಹುಡುಕಬಹುದೇ?
ಹೌದು, ನಿಮ್ಮ ಅರ್ಜಿಯನ್ನು ಸಂಬಂಧಪಟ್ಟ ಪಶುವೈದ್ಯಕೀಯ ಸಂಸ್ಥೆಯಿಂದ ಪಡೆದ ಸ್ವೀಕೃತಿ ಸಂಖ್ಯೆಯ ಆಧಾರದ ಮೇಲೆ ಆನ್-ಲೈನ್ ಮೂಲಕ ಹುಡುಕಬಹುದು.
4. ಅರ್ಜಿಯನ್ನು ಸಲ್ಲಿಸಿದ ನಂತರ ರಶೀದಿಯನ್ನು ಮುದ್ರಿಸಬಹುದೇ?
ಹೌದು, ಅರ್ಜಿಯನ್ನು ಸಲ್ಲಿಸಿದ ನಂತರ ಸ್ವೀಕೃತಿ ಪತ್ರವನ್ನು ಆನ್-ಲೈನ್ ನಲ್ಲಿ ಮುದ್ರಿಸಬಹುದು.
5. ಪಶು ಭಾಗ್ಯ ಯೋಜನೆಗೆ ಅರ್ಜಿಯನ್ನು ನೇರವಾಗಿಸಲ್ಲಿಸಬಹುದೇ?
ಪಶು ಭಾಗ್ಯ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮೊದಲು ನೀವು FRUITS ವೆಬ್-ಸೈಟ್ ನಲ್ಲಿ ನೊಂದಣಿ ಮಾಡಿಕೊಂಡು, FARMER ID (FID) ಸಂಖ್ಯೆಯನ್ನು ಪಡೆದುಕೊಳ್ಳುವುದು ಸೂಕ್ತ. ನಿಮ್ಮ ಹತ್ತಿರದ ಪಶುವೈದ್ಯಕೀಯ ಸಂಸ್ಥೆಯಲ್ಲಿಯೂ ಸಹ FRUITS ವೆಬ್-ಸೈಟ್ ನಲ್ಲಿ ನೊಂದಣಿ ಮಾಡಿಕೊಳ್ಳಲು ಸಹಾಯ ಮಾಡುವರು.
6. ಪಶು ಭಾಗ್ಯ ಯೋಜನೆಗೆ ಅರ್ಜಿಯನ್ನು FRUITS FARMER ID ಇಲ್ಲದೇ ಸಲ್ಲಿಸಬಹುದೇ?
ಹೌದು, ನೀವು ಸಲ್ಲಿಸುವ ಅರ್ಜಿಯ ಮಾಹಿತಿಯನ್ನಾಧರಿಸಿ ಸಂಬಂಧಪಟ್ಟ ಅಧಿಕಾರಿಯವರು FRUITS ವೆಬ್-ಸೈಟ್ ನಲ್ಲಿ ನೊಂದಣಿ ಮಾಡುವರು.
7. FRUITS ವೆಬ್ಸೈಟ್ ವಿಳಾಸವೇನು?
8. ಪಶು ಭಾಗ್ಯ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು FRUITS FARMER ID ಕಡ್ಡಾಯ ಏಕೆ?
ನೀವು FRUITS ವೆಬ್ಸೈಟ್ ನಲ್ಲಿ ನೊಂದಾಯಿಸಿ FARMER ID ಹೊಂದಿದ್ದರೆ, ಪಶು ಭಾಗ್ಯ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ದಾಖಲಾತಿಗಳ ಅವಶ್ಯಕತೆ ಇರುವುದಿಲ್ಲ. ಅರ್ಜಿ ಸಲ್ಲಿಸಲು ಬೇಕಾದ ಬಹುತೇಕ ಎಲ್ಲಾ ಮಾಹಿತಿಗಳನ್ನು FRUITS ವೆಬ್-ಸೈಟ್ ನಿಂದ ಪಡೆಯಲಾಗುತ್ತದೆ.

ಅರ್ಜಿಯ ಪ್ರಸ್ತುತ ಸ್ಥಿತಿ ಹುಡುಕುವ ಕುರಿತು

1. ಪಶು ಭಾಗ್ಯ ಯೋಜನೆಗೆ ಸಲ್ಲಿಸಿದ ಅರ್ಜಿಯ ಪ್ರಸ್ತುತ ಸ್ಥಿತಿಯನ್ನು ತಿಳಿಯುವುದು ಹೇಗೆ?
ಪಶು ಭಾಗ್ಯ ಯೋಜನೆ ಅರ್ಜಿಯ ಪ್ರಸ್ತುತ ಸ್ಥಿತಿಯನ್ನು ಆನ್-ಲೈನ್ ಮೂಲಕ ತಿಳಿದುಕೊಳ್ಳಬಹುದು. ನಿಮ್ಮ ಅರ್ಜಿಯನ್ನು ಹುಡುಕಲು ಸ್ವೀಕೃತಿ ಸಂಖ್ಯೆ ಅಥವಾ FRUITS FARMER ID ಅಗತ್ಯವಿರುತ್ತದೆ.
2. ಪಶು ಭಾಗ್ಯ ಯೋಜನೆಗೆ ಸಲ್ಲಿಸಿದ ಅರ್ಜಿಯ ಪ್ರಸ್ತುತ ಸ್ಥಿತಿಯ ಕುರಿತಾದ ಪ್ರಶ್ನೆಗಳಿಗೆ ಯಾರನ್ನು ಸಂಪರ್ಕಿಸಬೇಕು?
ಪಶು ಭಾಗ್ಯ ಯೋಜನೆ ಅರ್ಜಿಯ ಪ್ರಸ್ತುತ ಸ್ಥಿತಿಯನ್ನು ಆನ್ಲೈನ್ ಮೂಲಕ ತಿಳಿದುಕೊಂಡು, ನಿಮ್ಮ ಅರ್ಜಿಯನ್ನು ಹೊಂದಿರುವ ಅಧಿಕಾರಿಯವರನ್ನು ಸಂಪರ್ಕಿಸಬಹುದು. ಇಲ್ಲವೇ, ತಾಲ್ಲೂಕು ಪಶು ಆಸ್ಪತ್ರೆಯನ್ನೂ ಸಹ ಸಂಪರ್ಕಿಸಬಹುದು.